ಸಂಘವು ತನ್ನ ಮುಂಬರುವ ದಿನಗಳಲ್ಲಿ ಸಾಧಿಸಬೇಕಾದ ಗುರಿಗಳು
- ಸಂಘದ ಸದಸ್ಯರ ಸಂಖ್ಯೆ ಪ್ರಸ್ತುತ ಕಡಿಮೆ ಪ್ರಮಾಣದಲ್ಲಿದೆ. ಅದನ್ನು ಹೆಚ್ಚಿಸಲು ಕಾರ್ಯ ಪ್ರರ್ವತವಾಗಬೇಕಾಗಿದೆ.
- ಸಂಘದ ವತಿಯಿಂದ ನಡೆಯುವ ವಿವಿಧ ಸ್ವಾತಂತ್ರ್ಯ ಹೋರಾಟಗಾರರ ಜಯಂತಿ ಮತ್ತು ಸ್ಮೃತಿ ದಿನವನ್ನು ಸಾರ್ವಜನಿಕವಾಗಿ ಆಚರಿಸುವುದು.
- ಸಂಘದ ವತಿಯಿಂದ ಗ್ರಾಮದಲ್ಲಿ ನಡೆಯುವ ಮಾರುತೇಶ್ವರ ಜಾತ್ರಾ ಮಹೋತ್ಸವ ಹಾಗೂ ವಿವಿಧ ಹಬ್ಬಗಳಲ್ಲಿ ಸಂಸ್ಕೃತಿಕ ಕಾರ್ಯಕ್ರಮ ಆಯೋಜಿಸುವುದು.
- ಗ್ರಾಮದಲ್ಲಿ ಸಂಸ್ಥೆಯ ಅಧಿಕೃತ ಕಛೇರಿ ಸ್ಥಾಪಿಸುವುದು.
- ಸಂಘವನ್ನು "ಕರ್ನಾಟಕ ಸಂಘಗಳ ನೋಂದಣಿ ಕಾಯ್ದೆ 1961" ಪ್ರಕಾರ ನೋಂದಣಿ ಮಾಡಿಸುವುದು.
- ಗ್ರಾಮದಲ್ಲಿ ಸಹಕಾರಿ ಬ್ಯಾಂಕ್ ಇಲ್ಲದಿರುವದರಿಂದ, ಸಂಘದ ವತಿಯಿಂದ ಅದನ್ನು ಪ್ರಾರಂಭಿಸುವುದು.
- ಗ್ರಾಮದಲ್ಲಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಮತ್ತು ಗ್ರಾಮ ಅಭಿವೃದ್ಧಿಯತ್ತ ಸಾಗಲು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸುವುದು.
- ಪುರಾಣ, ಪ್ರವಚನ ಮತ್ತು ಪುಣ್ಯ ಕಥೆಗಳ ಮೂಲಕ ಧಾರ್ಮಿಕ ಜಾಗೃತಿ ಮೂಡಿಸುವುದು.
- ಇಂದಿನ ಅಗತ್ಯತೆಗೆ ಅನುಗುಣವಾಗಿ ವನಮಹೋತ್ಸವ, ಶುಭ್ರ ಪರಿಸರ ನಿರ್ಮಾಣಕ್ಕೆ ಜನರಲ್ಲಿ ತಿಳುವಳಿಕೆಯನ್ನು ಬೀದಿ ನಾಟಕದಂತಹ ಕಾರ್ಯಕ್ರಮಗಳನ್ನು ಏರ್ಪಡಿಸುವುದು ಹಾಗೂ ರಕ್ತದಾನ, ನೇತ್ರದಾನದಂತಹ ಆರೋಗ್ಯ ಶಿಬಿರಗಳನ್ನು ನಡೆಸುವುದು.
- ಧಾರ್ಮಿಕ ಕ್ಷೇತ್ರಗಳ ಸಂರಕ್ಷಣೆ ಹಾಗೂ ಸಾರ್ವಜನಿಕ ಕುಂದುಕೊರತೆಗಳನ್ನು ಆಲಿಸಿ ಸೂಕ್ತ ಪರಿಹಾರಕ್ಕಾಗಿ ಶ್ರಮಿಸುವುದು.
*******

No comments:
Post a Comment