Image 1
Image 2
Image 3
Image 4
Image 5

ಗ್ರಾಮದ ವಿವಿಧ ಜಾತ್ರೆ ಮತ್ತು ಹಬ್ಬದ ದಿನಾಂಕಗಳು


ಮಾರುತೇಶ್ವರ ಕಾರ್ತಿಕೋತ್ಸವ : 26 ಡಿಸೆಂಬರ್ 2026
ತೆಂಗಿನಕಾಯಿ ತೂರುವ ಜಾತ್ರೆ : 27 ಡಿಸೆಂಬರ್ 2026


👉ಪ್ರಿಯ ಓದುಗರೇ,
ನಿಮ್ಮ ಸ್ವರಚಿತ ಕಥೆ, ಕವನ, ಲೇಖನಗಳನ್ನು ಪ್ರಕಟಿಸಲು ಮೊದಲ ಆಯ್ಕೆ ಕ್ಲಿಕ್‌ ಮಾಡಿ.
1. ಲೇಖನ/ಕವನಗಳನ್ನು ಪ್ರಕಟಿಸಲು
2. ಓದುಗರ ಲೇಖನ/ಕವನಗಳು

ಸೂಳಿಕೇರಿ ಗ್ರಾಮ ಸಂಕ್ಷಿಪ್ತ ನೋಟ

ಸಮಗ್ರ ಸುರಗಿರಿ 

ಸೂಳಿಕೇರಿ ಗ್ರಾಮ ದರ್ಶನ


ಗ್ರಾಮವನ್ನು ಮೊದಲು ಸುರಗಿರಿ ಎಂಬ ಹೆಸರಿನಿಂದ ಕರೆಯಲ್ಪಡುತ್ತಿತ್ತು ಪ್ರಸ್ತುತ ಸೂಳಿಕೇರಿ ಎಂಬ ಹೆಸರಿನಿಂದ ಕರೆಯಲ್ಪಡುತ್ತದೆ. (ಹೆಸರು ಬದಲಾವಣೆ ಕುರಿತ ಮಾಹಿತಿ ಲಭ್ಯವಾಗಿಲ್ಲ) 

Sulikeri Map
ಸೂಳಿಕೇರಿ ಗ್ರಾಮವೂ ಬಾಗಲಕೋಟೆ ಲೋಕಸಭಾ, ಬೀಳಗಿ ವಿಧಾನಸಭಾ ಮತಕ್ಷೇತ್ರಗಳ ವ್ಯಾಪ್ತಿಗೆ ಒಳಪಟ್ಟಿದೆ. 2011ರ ಜನಗಣತಿಯ ಪ್ರಕಾರ ಸೂಳಿಕೇರಿ ಗ್ರಾಮವು 2870 ರಷ್ಟು ಜನಸಂಖ್ಯೆಯನ್ನು ಹೊಂದಿದೆ, 1420 ರಷ್ಟು ಪುರುಷರು ಮತ್ತು 1449 ರಷ್ಟು ಮಹಿಳೆಯರಿದ್ದಾರೆ. ಸಾಕ್ಷರತೆ ಪ್ರಮಾಣ ಶೇ. 58.15 ರಷ್ಟಿದ್ದು. ಶೇ. 69.50 ರಷ್ಟು ಪುರುಷರು ಹಾಗೂ ಶೇ. 47.06 ರಷ್ಟು ಮಹಿಳಾ ಸಾಕ್ಷರತರಿದ್ದಾರೆ.


ಭೌಗೋಳಿಕ ಪ್ರದೇಶ 


ಒಟ್ಟಾರೆ ವಿಸ್ತೀರ್ಣ 892.42 ಹೆಕ್ಟರ್, ಕಲ್ಲು ಮಿಶ್ರಿತ ಕೆಂಪು ಮತ್ತು ಕಪ್ಪು ಮಣ್ಣು ಹಾಗೂ ಬೆನಚು ಮಿಶ್ರಿತ ಬಿಳಿಶಿಲೆಯನ್ನು ಒಳಗೊಂಡಿದೆ. ಸುಮಾರು 1000 ಕಿಂತ ಹೆಚ್ಚು ಮನೆಗಳನ್ನು, ಮೂಲಭೂತ ಸೌಕರ್ಯಗಳನ್ನು ಹೊಂದಿದೆ. ಸಜ್ಜೆ, ಜೋಳ, ಶೇಂಗಾ ಪ್ರಮುಖ ಬೆಳೆಗಳು. ಬಿಳಿ ಜೋಳ, ಹೆಸರು, ಕಡಲೆ ಆಹಾರ ಬೆಳೆಗಳು. ಕಬ್ಬು, ಸೂರ್ಯಕಾಂತಿ, ಲಿಂಬೆ, ಬಾಳೆ, ದ್ರಾಕ್ಷಿ ಪ್ರಮುಖ ವಾಣಿಜ್ಯ ಬೆಳೆಗಳು.


ಸೂಳಿಕೇರಿ ಗ್ರಾಮದ ಗೂಗಲ್ ನಕ್ಷೆ

 

ದೇವಸ್ಥಾನಗಳು: 


ಮಾರುತೇಶ್ವರ, ಕಾಂಚನೇಶ್ವರಿ, ಹತ್ತಿಮರದಮ್ಮ , ಬಸವೇಶ್ವರ, ದುರ್ಗಾದೇವಿ, ಕರಿಯಮ್ಮ , ಮಲಿಯಮ್ಮ ಮತ್ತು ದ್ಯಾಮವ್ವನ ದೇವಾಲಯಗಳಿವೆ. ಮಸೀದಿ, ರಾಮ ಮಂದಿರ, ಮಳಿಯಪ್ಪಯ್ಯನ ಮಠ ಮತ್ತು ವೀರಶೈವ ಹಿರೇಮಠಗಳಿವೆ. 


ಗ್ರಾಮದಲ್ಲಿನ ಪ್ರಮುಖ ದೇವಾಲಯಗಳ ವಿವರವಾದ ಮಾಹಿತಿಗಾಗಿ ಕೆಳಗಿನ LINK ಗಳನ್ನು ಕ್ಲಿಕ್ ಮಾಡಿ



*******





No comments:

Post a Comment

SUBSCRIBE US