"ಎಲ್ಲಿ ಹನುಮನೋ ಅಲ್ಲಿ ರಾಮನು" ಎಂಬಂತೆ ಸೂಳಿಕೇರಿ ಗ್ರಾಮದಲ್ಲಿ ಶ್ರೀರಾಮ ಮಂದಿರವೂ ಇರುವುದು ವಿಶೇಷವಾಗಿದೆ. 12 ನೇ ಶತಮಾನದಲ್ಲಿ ನಿರ್ಮಾಣವಾದ ಅತಿ ಪುರಾತನ ಕಾಲದ ಶ್ರೀ ರಾಮದೇವರ ದೇವಸ್ಥಾನವು ಸುಕ್ಷೇತ್ರ ಸುಳಿಕೇರಿಯಲ್ಲಿದ್ದು ಅದು ಬದಾಮಿ ತಾಲೂಕಿನ ಬಾಗಲಕೋಟೆ ಜಿಲ್ಲೆಯ ಅತಿ ಪುರಾತನ ಸುಪ್ರಸಿದ್ದ ದೇವಾಲಯಗಳಲೊಂದಾಗಿದೆ. ಇಷ್ಟಾರ್ಥ ಸಿದ್ದಿಗಳನ್ನು ಪೂರೈಸುವ ಪ್ರಾಚೀನ ಪವಿತ್ರ ಕ್ಷೇತ್ರವಾಗಿದ್ದು, ಏಕಶಿಲಾ ಶ್ರೀರಾಮ ದೇವರ ಮೂರ್ತಿ ಇದೆ.
![]() |
| ಏಕಶಿಲಾ ಶ್ರೀರಾಮ ದೇವರ ಮೂರ್ತಿ |
ಶ್ರೀರಾಮಚಂದ್ರ ಸೀತಾದೇವಿ ಹಾಗೂ ಶ್ರೀ ಆಂಜನೇಯ ಸಹಿತನಾಗಿ ಪರಮ ಪವಿತ್ರವಾದ ಏಕಶಿಲಾ ಶಾಲಿಗ್ರಾಮದಲ್ಲಿ ನೆಲೆಸಿದ್ದು ಇದರ ಪೀಠ ಪ್ರಭಾವಳಿಯಲ್ಲಿ ದಶಾವತಾರ ಹೊಂದಿದ ಈ ದೇಗುಲ ಜಾಗೃತ ಸ್ಥಳವೆನಿಸಿದೆ. ಜಾತಿ, ಧರ್ಮ ಎನ್ನದೆ ಎಲ್ಲ ವರ್ಗದ ಭಕ್ತರ ಶ್ರದ್ಧಾ ಕೇಂದ್ರವಾಗಿದೆ.
ಇದರ ಪ್ರಾಚೀನತೆ ಕುರಿತಂತೆ ಯಾವ ಐತಿಹ್ಯ ಇಲ್ಲದಿದ್ದರೂ ಗರ್ಭಗುಡಿಯಲ್ಲಿ ಕೆತ್ತಲಾಗಿರುವ ಪ್ರಾಚೀನ ಸಂಸ್ಕೃತದಲ್ಲಿರುವ ಶಿಲಾ ಶಾಸನದ ಪ್ರಕಾರ ಇಲ್ಲಿನ ಶ್ರೀರಾಮಚಂದ್ರನ ಶಿಲಾಮೂರ್ತಿ ಹನ್ನೆರಡನೇಯ ಶತಮಾನದಷ್ಟು ಹಿಂದಿನದು ಎಂದು ಗ್ರಾಮಸ್ಥರು ಹೇಳುತ್ತಾರೆ.
ದೇವಾಲಯದ ಬಾಗಿಲವಾಡ, ಪೇದ್ಯಾಭಾಗ, ಲಲಾಟಬಿಂಬದ ಆಕರ್ಷಕ ಕೆತ್ತನೆಗಳು, ದೇವರ ಪಾದಕಮಲಗಳನ್ನು ಸೂರ್ಯನ ಕಿರಣಗಳು ಸ್ಪರ್ಶಿಸುವಂತೆ ಮೂರ್ತಿ ಪ್ರತಿಷ್ಠಾಪಿಸಿರುವ ಪ್ರಾಚೀನ ವಾಸ್ತು ಶಿಲ್ಪ ಪ್ರಕಾರವನ್ನು ಗಮನಿಸಿದಾಗ ಶ್ರೀರಾಮನ ಮೂರ್ತಿ ಹನ್ನೆರಡನೇ ಶತಮಾನದಷ್ಟು ಹಿಂದಿನದು ಎಂದು ಹೇಳಲಾಗುತ್ತದೆ. ಅವಿಭಜಿತ ವಿಜಯಪುರ ಜಿಲ್ಲೆಯ ಗೆಜೆಟೇರಿಯನ್‌ಲ್ಲಿದ್ದು (ಬ್ರಿಟೀಷ್ ದಾಖಲೆ) ಈ ಮಂದಿರದ ಬಗ್ಗೆ ಉಲ್ಲೇಖವಿದೆ.
ಸೀತಾ ರಾಮನಿಗೆ ಸೂರ್ಯ ರಶ್ಮಿಯ ಅಭಿಷೇಕ
ಐತಿಹಾಸಿಕ ಹಿನ್ನೆಲೆ ಹೊಂದಿರುವ ಸೂಳಿಕೇರಿ ಗ್ರಾಮದ ಶ್ರೀಸೀತಾ ರಾಮಚಂದ್ರ ದೇವರ ಸನ್ನಿಧಿಯಲ್ಲಿ ಪ್ರತಿ ಸಂವತ್ಸರದ ಯುಗಾದಿ ಹಬ್ಬದ ಶುಭ ಸಂದರ್ಭದಲ್ಲಿ , ಸೂರ್ಯ ರಶ್ಮಿ ಆಂಜನೇಯ ಸಮೇತ ಶ್ರೀಸೀತಾ ರಾಮಚಂದ್ರ ದೇವರ ಪಾದ ಕಮಲವನ್ನು ಸ್ಪರ್ಶಿಸುವ ಮೂಲಕ ಯುಗಾದಿ ಪುಣ್ಯ ಕಾಲದಲ್ಲಿ ಈ ದೇವಸ್ಥಾನ ಅದ್ಭುತ ಕ್ಷಣಕ್ಕೆ ಸಾಕ್ಷಿಯಾಗುವುದು.
![]() |
| ಸೂರ್ಯನ ಕಿರಣಗಳು ಶ್ರೀರಾಮನ ಪಾದ ಸ್ಪರ್ಧಿಸುತ್ತಿರುವ ದೃಶ್ಯ |
ಸೂಳಿಕೇರಿ ಶ್ರೀರಾಮ ಮಂದಿರ ಕುರಿತ ವಿಡಿಯೋ ವೀಕ್ಷಿಸಿ






No comments:
Post a Comment