ಸೂಳಿಕೇರಿ: ತ್ಯಾಗ ಭಾವೈಕ್ಯದ ಸಂಕೇತವಾಗಿರುವ ಮೊಹರಂ ಹಬ್ಬವನ್ನು ಗ್ರಾಮದಲ್ಲಿ ಭಾನುವಾರ ವಿಜೃಂಭಣೆಯಿಂದ ಆಚರಿಸಲಾಯಿತು.
ಮೊಹರಂ ಹಬ್ಬದ ನಿಮಿತ್ತ ರಿವಾಯತ್ (ಮೊಹರಂ ಪದ) ಗಳ ಗೀತಗಾಯನ ನಡೆಯಿತು. ಗಂಧರಾತ್ರಿಯಂದು ನಡೆಯುವ ವಿಶೇಷ ಪೂಜೆಗಳಲ್ಲಿ ಸರ್ವಧರ್ಮಿಯರು ಪಾಲ್ಗೊಂಡು ಭಾವೈಕ್ಯತೆಗೆ ಸಾಕ್ಷಿಯಾದರು.
ಹಬ್ಬದ ಕೊನೆಯ ದಿನ ರವಿವಾರ ದೇವರನ್ನು ವಿಸರ್ಜಿಸಲು ಹೊಳೆಗೆ ಒಯ್ಯುವ ಮುಂಚೆ ನಡೆಯುವ ಡೋಲಿ ಉತ್ಸವದಲ್ಲಿ ಗ್ರಾಮಸ್ಥರು ದೇವರಿಗೆ ಬೆತ್ತಾಸು, ಖಾರಿಕ ಅರ್ಪಿಸಿ ಹರಕೆ ತೀರಿಸಿದರು. ವಿಶೇಷ ಸಿಹಿ ಖಾದ್ಯ ಚೊಂಗೆ ತಯಾರಿಸಿ ದೇವರಿಗೆ ನೈವೇದ್ಯ ಅರ್ಪಿಸಿ ಅವುಗಳನ್ನು ಹಿಂದು ಬಾಂಧವರೊಂದಿಗೆ ಹಂಚಿಕೊಳ್ಳುವ ಮೂಲಕ ಭಾವೈಕ್ಯ ಮೆರೆದರು.
ಗ್ರಾಮದ ಯುವಕರ ಲೇಝಿಮ್ ನೃತ್ಯ ನೆರೆದಿದ್ದ ಜನಸ್ತೋಮದ ಗಮನ ಸೆಳೆಯಿತು.
✰✰✰✰✰✰✰





No comments:
Post a Comment