ಕಛೇರಿಗಳು
ಸೂಳಿಕೇರಿ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ, ಅಂಚೆ ಕಛೇರಿ, ಪ್ರಾಥಮಿಕ ಹಾಗೂ ಪ್ರೌಢ ಶಾಲೆ, ಸಾರ್ವಜನಿಕ ಗ್ರಂಥಾಲಯ ಮತ್ತು ನ್ಯಾಯ ಬೇಲೆ ಅಂಗಡಿ ಇದೆ. ಸೂಳಿಕೇರಿ ಗ್ರಾಮ ಪಂಚಾಯಿತಿಯು ಸೂಳಿಕೇರಿ, ಕಾಗಲಗೊಂಬ ಮತ್ತು ಕೆರಕಲಮಟ್ಟಿ ಗ್ರಾಮಗಳನ್ನು ಒಳಗೊಂಡಿದೆ.
ಗ್ರಾಮದ ವಿವಿಧ ಸಂಘ ಸಂಸ್ಥೆಗಳು
- ಶ್ರೀ ಭಗತ್ ಸಿಂಗ್ ಸೇವಾ ಸಮಿತಿ
- ನಿವೃತ್ತ ಹಾಗೂ ಹಾಲಿ ನೌಕರರ ಕ್ಷೇಮಾಭಿವೃದ್ಧಿ ಸಂಘ (ರಿ)
- ಹಾಲಿ ಮತ್ತು ಮಾಜಿ ಸೈನಿಕರ ಸಂಘ (ರಿ)
- ಶ್ರೀ ಅದಿಶಕ್ತಿ ಮಲಿಯಮ್ಮದೇವಿ ಸಂಘ
- ಶ್ರೀ ಮಾರುತೇಶ್ವರ ತರುಣ ಸಂಘ
- ಶ್ರೀ ಮೇಘರಾಜ ತರುಣ ಸಂಘ
- ಶ್ರೀ ಬಸವೇಶ್ವರ ಸಂಘ
- ಶ್ರೀ ಕೃಷ್ಣಯಾದವ (ಗೊಲ್ಲ) ಕ್ಷೇಮಾಭಿವೃದ್ಧಿ ಸಂಘ (ರಿ)
- ಶ್ರೀ ವಾಲ್ಮೀಕಿ ಕ್ಷೇಮಾಭಿವೃದ್ಧಿ ಸಂಘ
- ಇಸ್ಲಾಂ ಜಮಾತ್ ಸಂಘ
- ಶ್ರೀ ಅಂಬೇಡ್ಕರ ಸಂಘ
- ಶ್ರೀ ಏಕದಂತ ಸಂಘ
ಬಿಟ್ಟು ಹೋದ ಸಂಘ-ಸಂಸ್ಥೆಗಳ ಹೆಸರನ್ನು ಸೇರಿಸಲು
👉Click here
ಉದ್ಯೋಗ
ಸೂಳಿಕೇರಿ ಗ್ರಾಮದಲ್ಲಿ ಪ್ರಮುಖವಾಗಿ ವ್ಯವಸಾಯ, ಬಡಿಗರು, ಕಮ್ಮಾರರು, ಕೃಷಿ ಕೂಲಿಕಾರರು, ಕ್ಷೌರಿಕರು ಮುಂತಾದ ಕಸುಬು ಅವಲಂಬಿಸಿದ್ದಾರೆ. 100ಕ್ಕೂ ಹೆಚ್ಚು ಮಂದಿ ವಿವಿಧ ತಂಡಗಳಾಗಿ ವಿದ್ಯುತ್ ಕಂಬದ ಕೆಲಸಕ್ಕೂ ಹೋಗುತ್ತಾರೆ. ಅನೇಕ ಯುವಕರು ಯೋಧರಾಗಿ ದೇಶದ ಸೇವೆ ಸಲ್ಲಿಸುತ್ತಿದ್ದಾರೆ. ಅಲ್ಲದೆ 30ಕ್ಕೂ ಹೆಚ್ಚು ಮಂದಿ ಪವರ್ ಮ್ಯಾನ್‌ಗಳಾಗಿ ಮತ್ತು ಅನೇಕರು ಸಾರಿಗೆ ಸಂಸ್ಥೆಯಲ್ಲಿ ಮತ್ತು ವಕೀಲರಾಗಿ ಸೇವೆ ಸಲ್ಲಿಸುತ್ತಿದ್ದಾರೆ.


No comments:
Post a Comment