Image 1
Image 2
Image 3
Image 4
Image 5

ಗ್ರಾಮದ ವಿವಿಧ ಜಾತ್ರೆ ಮತ್ತು ಹಬ್ಬದ ದಿನಾಂಕಗಳು


ಮಾರುತೇಶ್ವರ ಕಾರ್ತಿಕೋತ್ಸವ : 26 ಡಿಸೆಂಬರ್ 2026
ತೆಂಗಿನಕಾಯಿ ತೂರುವ ಜಾತ್ರೆ : 27 ಡಿಸೆಂಬರ್ 2026


👉ಪ್ರಿಯ ಓದುಗರೇ,
ನಿಮ್ಮ ಸ್ವರಚಿತ ಕಥೆ, ಕವನ, ಲೇಖನಗಳನ್ನು ಪ್ರಕಟಿಸಲು ಮೊದಲ ಆಯ್ಕೆ ಕ್ಲಿಕ್‌ ಮಾಡಿ.
1. ಲೇಖನ/ಕವನಗಳನ್ನು ಪ್ರಕಟಿಸಲು
2. ಓದುಗರ ಲೇಖನ/ಕವನಗಳು

ಸೂಳಿಕೇರಿ ಗ್ರಾಮದೇವತೆ ಕಾಂಚನೇಶ್ವರಿದೇವಿ ಮಹಿಮೆ ಅಪಾರ

ಕಾಂಚನೇಶ್ವರಿದೇವಿಯು ಸೂಳಿಕೇರಿ ಗ್ರಾಮದ ಶಕ್ತಿ ದೇವತೆ. ಪ್ರತಿ ವರ್ಷ ದೇವಿಯ ಜಾತ್ರೆ ನಡೆಯುತ್ತದೆ. ಬಹುತೇಕ ಉತ್ತರ ಕರ್ನಾಟಕದ ಎಲ್ಲ ಗ್ರಾಮಗಳಲ್ಲಿ ಮುಂಗಾರು ಮಳೆ ಆರಂಭವಾಗುವ ಮುನ್ನ ಜನರು ಉತ್ತಮ ಮಳೆ, ಬೆಳೆಗಾಗಿ ಪ್ರಾರ್ಥಿಸಿ ಗ್ರಾಮದೇವಿಗೆ ವಾರ ಹಿಡಿಯುವ ಸಂಪ್ರದಾಯ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಐದು ವಾರ ಹಿಡಿದು ಕೊನೆ ವಾರದ ದಿನದಂದು ಗ್ರಾಮದೇವತೆಗೆ ಉಡಿ ತುಂಬಿ ಮಳೆ,ಬೆಳೆ ಉತ್ತಮವಾಗಿ ಬರಲಿ ಎಂದು ಸಾಮೂಹಿಕವಾಗಿ ಪ್ರಾರ್ಥಿಸುತವುದು ಸಂಪ್ರದಾಯ.

ಕಾಂಚನೇಶ್ವರಿ ದೇವಿ ದೇವಸ್ಥಾನ ಸೂಳಿಕೇರಿ
ಕಾಂಚನೇಶ್ವರಿ ದೇವಿ ದೇವಸ್ಥಾನ ಸೂಳಿಕೇರಿ
ಅದೆ ರೀತಿ ಸೂಳಿಕೇರಿ ಗ್ರಾಮದಲ್ಲೂ ಸಹ ಐದು ವಾರಗಳ ಕಾಲ ಮಳೆ, ಬೆಳೆ ಸಮೃದ್ಧವಾಗಲ್ಲಿ ಎಂದು ಪ್ರಾರ್ಥಿಸಿ ಗ್ರಾಮದೇವತೆಗೆ (ಕಾಂಚನೇಶ್ವರಿದೇವಿ) ವಾರವನ್ನು ಹಿಡಿಯುತ್ತಾರೆ. ವಾರದ ಕೊನೆಯ ದಿನ ಜನರು ಶ್ರದ್ದಾ ಭಕ್ತಿಯಿಂದ ದೇವಿಗೆ  ಉಡಿತುಂಬುತ್ತಾರೆ. ಪ್ರತಿ ವರ್ಷವೂ ಉತ್ತಮ ಮುಂಗಾರು ನೀಡುವಂತೆ ರೈತಾಪಿಗಳು ದೇವಿಯನ್ನು ಪ್ರಾರ್ಥಿಸಿ ತಮ್ಮ ಕೃಷಿ ಕಾರ್ಯಗಳಿಗೆ ಅನುಮತಿ ಪಡೆಯುತ್ತಾರೆ. ಇದರ ನಂತರ ಉತ್ತಮ ಮಳೆ ಬಂದು ರೈತ ಹಾಗೂ ನಾಡಿನ ಜನತೆಯ ಬದುಕು ಹಸನಾಗುವುದು ಎಂಬುದು ಈ ಆಚರಣೆ ಹಿಂದಿನ ಉದ್ದೇಶಗಳಾಗಿವೆ.

ವಿಶೇಷವಾಗಿ ದೇವಿಗೆ ವಾರ ಹಿಡಿದಾಗ ಐದು ಮಂಗಳವಾರ ಅಥವಾ ಶುಕ್ರವಾರ ಇಡೀ ಊರಿನ ಎಲ್ಲಾ ದೇವರುಗಳಿಗೆ ನೀರು ಮತ್ತು ಬೇಳೆ ಕಾಳುಗಳನ್ನು ಯುವಕರು ಹೋಗಿ ನೀಡಿ ಬರುತ್ತಾರೆ.  


ಕೊನೆಯ ವಾರ ಬೆಳಗ್ಗೆಯಿಂದಲೇ ತಂಡೋಪತಂಡವಾಗಿ ಮಹಿಳೆಯರು ತಮ್ಮ ಮಕ್ಕಳು, ತಮ್ಮ ಕುಟುಂಬ ಸದಸ್ಯರೊಂದಿಗೆ ಕಾಯಿ, ಕರ್ಪೂರ, ಜೋಳದ ಕಡಬು, ಹೂರಣದ ಕಡಬು ಸೇರಿದಂತೆ ವಿವಿಧ ನೈವೇದ್ಯ, ಬಾಳೆಹಣ್ಣು, ಉಡಿಯಕ್ಕಿ ಸಾಮಾನುಗಳೊಂದಿಗೆ ಗ್ರಾಮದೇವಿಯ ದೇವಸ್ಥಾನಕ್ಕೆ ಆಗಮಿಸಿ ಗ್ರಾಮದೇವಿ ದರ್ಶನ ಪಡೆದು ದೇವಿಗೆ ಉಡಿ ತುಂಬಿ ತಮ್ಮ ಭಕ್ತಿ ಸಮರ್ಪಿಸುತ್ತಾರೆ. ಸಂಜೆ ದೇವಿಯ ಪಲ್ಲಕ್ಕಿಯು ಊರನ್ನು ಪ್ರದಕ್ಷಿಣೆ ಹಾಕಿ ದೇವಸ್ಥಾನದ ಬಳಿ ಬಂದಾಗ ಕಾಂಚನೇಶ್ವರಿದೇವಿಯು ಭಕ್ತನೊಬ್ಬನ ಮೈ ಮೇಲೆ ಬಂದು ಓಡಲು ಪ್ರಾರಂಭಿಸುತ್ತಾಳೆ. ಹೊಲಗಳಲ್ಲಿ ಹಾದು ಹೋಗುತ್ತಾ, ಮುಳ್ಳು ಕಂಟಿಗಳನ್ನು  ತುಳಿದಾಡುತ್ತಾ ಓಡುತ್ತಿರುವ ದೇವಿಯ ಹಿಂದೆ ಜನರು ಸಹ ಹೋಗುತ್ತಾರೆ. ದಾರಿಯುದ್ದಕ್ಕೂ ಭಕ್ತರು ದೇವಿಗೆ ಪೂಜೆ ಸಲ್ಲಿಸುತ್ತಾರೆ. ಪಕ್ಕದ ಕಾಗಲಗೊಂಬ ಗ್ರಾಮದ 
ಸಿಕ್ಕಲಮಟ್ಟೇಶ್ವರ ದೇವಾಲಯ ತಲುಪಿ, ದೇವಿಯು ಮರಳಿ ದೇವಸ್ಥಾನಕ್ಕೆ ಆಗಮಿಸಿದ ನಂತರ ಅಪಾರ ಭಕ್ತರ ಸಮ್ಮುಖದಲ್ಲಿ ಗ್ರಾಮದೇವಿಗೆ ವಿಶೇಷ ಪೂಜೆ ನೆರವೇರಿಸಿ ಉಡಿ ತುಂಬಿ ನಾಡಿಗೆ ಉತ್ತಮ ಮಳೆ-ಬೆಳೆ ನೀಡಿ ಎಲ್ಲಾ ಜನರನ್ನು ಸುಖ-ಸಂತೋಷ-ನೆಮ್ಮದಿಯಿಂದ ಇಡುವಂತೆ ದೇವಿಗೆ ಪ್ರಾರ್ಥನೆ ಸಲ್ಲಿಸುತ್ತಾರೆ. ನಂತರ ಕರ್ಪೂರದ ಆರತಿಯೊಂದಿಗೆ ಜನರು ದೇವಿಗೆ ನಮನ ಸಲ್ಲಿಸಿ ಸುಮಂಗಲೆಯರಿಂದ ದೇವಿಗೆ ಉಡಿ ತುಂಬುವ ಕಾರ್ಯಕ್ರಮ ನೆರವೇರಿಸುತ್ತಾರೆ. 


ಹೀಗೆ ಸುತ್ತಮುತ್ತಲಿನ ಗ್ರಾಮಗಳ ಸದ್ಭಕ್ತರು ಬಂದು ದೇವಿಯ ದರ್ಶನ ಪಡೆದು, ಶಕ್ತಿ ದೇವತೆ ಕಾಂಚನೇಶ್ವರಿದೇವಿಗೆ ಗ್ರಾಮಸ್ಥರು ವಿಶೇಷವಾಗಿ 5 ವಾರಗಳ ದಿವಸ ಶ್ರದ್ಧಾ ಭಕ್ತಿಯಿಂದ ಪೂಜೆ ಸಲ್ಲಿಸಿ ಕೊನೆ ವಾರದಂದು ಭಕ್ತಿಯಿಂದ ಉಡಿ ತುಂಬುವುದು ವಿಶೇಷ.


*******


click on bell🔔 icon in the bottom left corner to get notification of  all Latest posts and articles of the website.

No comments:

Post a Comment

SUBSCRIBE US