Image 1
Image 2
Image 3
Image 4
Image 5

ಗ್ರಾಮದ ವಿವಿಧ ಜಾತ್ರೆ ಮತ್ತು ಹಬ್ಬದ ದಿನಾಂಕಗಳು


ಮಾರುತೇಶ್ವರ ಕಾರ್ತಿಕೋತ್ಸವ : 26 ಡಿಸೆಂಬರ್ 2026
ತೆಂಗಿನಕಾಯಿ ತೂರುವ ಜಾತ್ರೆ : 27 ಡಿಸೆಂಬರ್ 2026


👉ಪ್ರಿಯ ಓದುಗರೇ,
ನಿಮ್ಮ ಸ್ವರಚಿತ ಕಥೆ, ಕವನ, ಲೇಖನಗಳನ್ನು ಪ್ರಕಟಿಸಲು ಮೊದಲ ಆಯ್ಕೆ ಕ್ಲಿಕ್‌ ಮಾಡಿ.
1. ಲೇಖನ/ಕವನಗಳನ್ನು ಪ್ರಕಟಿಸಲು
2. ಓದುಗರ ಲೇಖನ/ಕವನಗಳು

ಸೂಳಿಕೇರಿ ಶ್ರೀ ಮಾರುತೇಶ್ವರ ಜಾತ್ರಾ ಮಹೋತ್ಸವಕ್ಕೆ ದಿನಗಣನೆ

ಸೂಳಿಕೇರಿ : ಶ್ರೀ ಮಾರುತೇಶ್ವರ ಜಾತ್ರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದೆ.
ಜಾತ್ರೆ ಎಂದರೆ ತೇರು ಎಳೆಯೋದು, ಪಲ್ಲಕ್ಕಿ ಉತ್ಸವ, ಉತ್ತತ್ತಿ ತೂರುವದು, ಹೂ-ಹಣ್ಣು ತೂರುವುದನ್ನು ಸಾಮಾನ್ಯವಾಗಿ ನೀವೆಲ್ಲರೂ ನೋಡಿದಿರಿ.
ಆದರೆ ಸಾವಿರಾರು ಜನರ ಮಧ್ಯೆಯೇ ನಿಂತು ಪಲ್ಲಕ್ಕಿ ಉತ್ಸವವೊಂದಕ್ಕೆ ಇಡಿಯಾದ ನೂರಾರು ತೆಂಗಿನಕಾಯಿಗಳನ್ನೇ ತೂರಲಾಗುತ್ತೇ ಅಂದ್ರೆ ನಂಬ್ತೀರಾ...!
ಇದು ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಸೂಳಿಕೇರಿ ಗ್ರಾಮದ ಮಾರುತೇಶ್ವರ ದೇವಸ್ಥಾನದ ಪಲ್ಲಕ್ಕಿ ಉತ್ಸವದಲ್ಲಿ ನಡೆದುಕೊಂಡು ಬಂದಿರೋ ಅಪರೂಪದ ಸಂಪ್ರದಾಯ ಪದ್ಧತಿ.
ಈ ರೋಮಾಂಚನಗೊಳಿಸೋ ಬಾನೆತ್ತರಕ್ಕೆ ತೆಂಗಿನ ಕಾಯಿ ತೂರುತ್ತಿರೋ ದೃಶ್ಯವನ್ನು ನೀವು ನೋಡಬಹುದು ಕಣ್ರೀ... 
ಇದೆ ಡಿಸೆಂಬರ್ 14 ಮತ್ತು 15 ರಂದು ಸೂಳಿಕೇರಿ ಗ್ರಾಮದ ಶ್ರೀ ಮಾರುತೇಶ್ವರನ ಜಾತ್ರೆ ನಡೆಯಲಿದೆ. 
ಕಾರ್ಯಕ್ರಮದ ವಿವರಗಳು
  • ದಿನಾಂಕ : 14-12-2024 ರಂದು  ರಾತ್ರಿ 8.00 ಗಂಟೆಗೆ ಕಾರ್ತಿಕ ದೀಪೋತ್ಸವ  ನಡೆಯಲಿದೆ
  • ದಿನಾಂಕ : 15-12-2024 ರಂದು ಪಲ್ಲಕ್ಕಿ ಉತ್ಸವ ಹಾಗೂ ಕಾಯಿ ತೂರುವ ಜಾತ್ರೆ ನಡೆಯಲಿದೆ. 

ಅಷ್ಟೇ ಅಲ್ಲ ಕಣ್ರೀ ಜಾತ್ರೆ ಸಲುವಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಕಬ್ಬಡಿ ಖೊಖೊದಂತಹ ಕ್ರೀಡೆಗಳನ್ನು ಸಹ ಆಯೋಜಿಸಲಾದೆ. 

ಸರ್ವರಿಗೂ ಹಾರ್ದಿಕ ಸ್ವಾಗತ

ಭಗತ್ ಸಮಿತಿ ಸೂಳಿಕೇರಿ ಹಾಗೂ ಗ್ರಾಮದ ಸಮಸ್ತ ಗುರು ಹಿರಿಯರು
✰✰✰✰✰✰✰





Related Posts : 

No comments:

Post a Comment

SUBSCRIBE US