ಸೂಳಿಕೇರಿ : ಗ್ರಾಮದ ಶ್ರೀ ಮಾರುತೇಶ್ವರನ ಜಾತ್ರೆ ಡಿ.14 ಮತ್ತು 15ರಂದು ಸಂಭ್ರಮದಿಂದ ಜರುಗಿತು.
ಡಿಸೆಂಬರ್ 14 ಕಾರ್ತಿಕ ದೀಪೋತ್ಸವದಂದು ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಗ್ರಾಮವು ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುತ್ತಿತ್ತು. ಲಕ್ಷಾಂತರ ಜನರು ದೀಪೋತ್ಸವದಲ್ಲಿ ಭಾಗಿಯಾಗಿ ಮಾರುತೇಶ್ವರನ ಕೃಪೆಗೆ ಪಾತ್ರರಾದರು.
ಅಂದು ಶ್ರೀ ತಿಮ್ಮಣ್ಣೇಶ್ವರ ತರುಣ ನಾಟ್ಯ ಸಂಘದ ವತಿಯಿಂದ ಮನದ ಒಡಕು ಮನೆಗೆ ಕೆಡಕು ಎಂಬ ಸುಂದರ ಸಾಮಾಜಿಕ ನಾಟಕವನ್ನು ಆಯೋಜಿಸಲಾಗಿತ್ತು.
ಮಾರನೆಯ ದಿನವೂ ಬೆಳಿಗ್ಗೆಯಿಂದಲೇ ವಿವಿಧ ಪೂಜಾ ಕೈಂಕರ್ಯಗಳನ್ನು ಹಮ್ಮಿಕೊಳ್ಳಲಾಗಿತ್ತು. ಅಂದು ಸಂಜೆ ಊರೆಲ್ಲ ಸುತ್ತಿ ಬಂದ ಪಲ್ಲಕಿ ಉತ್ಸವದ ಮೆರವಣಿಗೆ, ದೇವಸ್ಥಾನವನ್ನು ಐದು ಬಾರಿ ಪ್ರದಕ್ಷಿಣೆ ಹಾಕಿದ ನಂತರ ಅಪಾರ ಸಂಖ್ಯಯಲ್ಲಿ ನೆರೆದ ಭಕ್ತರು ತೆಂಗಿನಕಾಯಿಗಳನ್ನು ಗೋಪುರದ ಮೇಲೆ ತೂರಲಾರಂಭಿಸಿದರು.
ಆದರೆ ನೂರಾರು ಭಕ್ತರ ಮಧ್ಯೆಯೇ ನಡೆದ್ರೂ ಯಾರೊಬ್ಬರಿಗೂ ಕಾಯಿ ತಾಕಿ ತೊಂದರೆಯಾದ ಉದಾಹರಣೆಗಳಿಲ್ಲ, ಒಂದೊಮ್ಮೆ ಬಡಿದ್ರೂ ಕಷ್ಟಗಳು ಪರಿಹಾರವಾಗ್ತಾವೆ ಅನ್ನೋ ನಂಬಿಕೆ ನಮ್ಮಲ್ಲಿದೆ ಅಂತಾರೆ ಗ್ರಾಮಸ್ಥರು. ಇಂದಿಗೂ ಯಾವುದೆ ಅನಾಹುತಗಳು ಆಗದಿರುವುದು ಶ್ರೀ ಮಾರುತೇಶ್ವರನ ಪವಾಡ ಎಂದು ಸ್ಥಳೀಯರು ಹೇಳಿದರು.
ಅಂದು ಸಹ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
![]() |
![]() |
![]() |
ಅಂದು ಸಹ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ಶ್ರೀ ಮೇಘರಾಜ ತರುಣ ನಾಟ್ಯ ಸಂಘದ ವತಿಯಿಂದ ಸಿಡಿದೆದ್ದ ಬಹದ್ದೂರ ಬಾಹುಬಲಿ ಎಂಬ ಸುಂದರ ಸಾಮಾಜಿಕ ನಾಟಕ ಆಯೋಜಿಸಲಾಗಿತ್ತು.
ನಿವೃತ್ತ ಹಾಗೂ ಹಾಲಿ ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ 14ರಂದು ಉಚಿತ ಆರೋಗ್ಯ ತಪಾಸಣಾ ಶಿಬಿರ ಮತ್ತು 15ರಂದು ನಿವೃತ್ತರಿಗೆ ಸನ್ಮಾನ, ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
Share this with your friends
ವಿಶೇಷ ಸೂಚನೆ
ಸೂಳಿಕೇರಿ ಶ್ರೀ ಮಾರುತೇಶ್ವರ ಜಾತ್ರೆ 2024ರ ನೀವು ಸೆರೆಹಿಡಿದ ಪೋಟೋ ಮತ್ತು ವಿಡಿಯೋವನ್ನು ನಮ್ಮwebsite ಮತ್ತು YouTube ಚಾನಲ್ನಲ್ಲಿ ನಿಮ್ಮ ಹೆಸರಿನೊಂದಿಗೆ ಉಚಿತವಾಗಿ ಪ್ರಕಟಿಸಲಾಗುವುದು.
Click here to Send Photos and Vedios👇







No comments:
Post a Comment